25 ಅಕ್ಟೋಬರ್ 2025 ರಂದು ವಿಜ್ರಂಬಣೆಯಿಂದ ನಮ್ಮ ಯೋಗ ಶಾಲೆಯಲ್ಲಿ ನಡೆಸಿದ ದೀಪೋತ್ಸವ ಕಾರ್ಯಕ್ರಮದ ಸಂಕ್ಷಿಪ್ತ ವರದಿ 1. ಬೆಂಗಳೂರಿನ 1 ನೇ ಬ್ಲಾಕ್ ರಾಜಾಜಿನಗರದಲ್ಲಿ 68 ವರ್ಷಗಳಿಂದ ಆರ್ಯ ಸೇವಾಶ್ರಮ ಟ್ರಸ್ಟ್ ನಡೆಸುತ್ತಿರುವ ಅನಾಥಾಲಯದ 35 ವಿಶೇಷ ವಿದ್ಯಾರ್ಥಿಗಳು ನಮ್ಮೊಂದಿಗೆ ದೀಪೋತ್ಸವ ಕಾರ್ಯಕ್ರಮದಲ್ಲಿ ಆಸಕ್ತಿಯಿಂದ ಭಾಗವಹಿದರು. 2. 250 ಹಣತೆಗಳಲ್ಲಿ ಪ್ರಜ್ವಲಿಸುವುದರೊಂದಿಗೆ, ಈ ಬಾರಿ ಚಿತ್ತಾರದ ಹಲವು ಮಜಲಿನ ದೀಪಸ್ತಂಭಗಳಲ್ಲಿ , ಜಗಮಗಿಸುವ ವಿದ್ಯುತ್ ಸರಮಾಲೆಯೊಂದಿಗೆ ನಾವೆಲ್ಲ ನಂದಾದೀಪಗಳನ್ನು ಬೆಳೆಗಿದೆವು. 3. ಬಣ್ಣ-ಬಣ್ಣದ ಸಾಂಪ್ರದಾಯಿಕ ಉಡುಗೆ, ತೊಡುಗೆಗಳಲ್ಲಿ ನಮ್ಮ ಎಲ್ಲ ಶಾಲಾ ಸ್ನೇಹಿತರು ಒಂದುಗೂಡಿ ಸಂತಸ, ಉಲ್ಲಾಸ ಹಂಚಿಕೊಂಡೆವು. ಹಲವು ದಿನಗಳಿಂದ ತಯಾರಿಮಾಡಿಕೊಂಡು ದೀಪಾವಳಿ ಹಬ್ಬದ ಮಹತ್ವ ಕುರಿತು ವಿಚಾರ ವಿನಿಮಯ, ಹಾಡು/ಕವನ ವಾಚನ, ಭಜನೆ, ರಂಗವಲ್ಲಿ, ರೇಖಾ/ಬಣ್ಣದ ಚಿತ್ರ ಪ್ರದರ್ಶನ, ಸಂಗೀತ, ನೃತ್ಯ ಮುಂತಾದ ನಮ್ಮೆಲ್ಲರ ಕೌಶಲ್ಯಗಳನ್ನು ದೀಪೋತ್ಸವ ಕಾರ್ಯಕ್ರಮದಂದು ಪ್ರಕಟಿಸಿದೆವು. 4. ನಮ್ಮ ಯೋಗ ಶಾಲಾ ಸ್ನೇಹಿತರು ಪ್ರತ್ಯೇಕವಾಗಿ ತಯಾರಿಸಿ ತಂದ ಬಗೆ-ಬಗೆಯಾದ ಖಾದ್ಯಗಳನ್ನು ಎಲ್ಲ ಮಿತ್ರರೊಂದಿಗೆ, ವಿಶೇಷ ವಿದ್ಯಾರ್ಥಿಗಳೊಂದಿಗೆ ಹಂಚಿ ಊಟ ಮಾಡಿದೆವು 5. ಸುಮಾರು 100 ಸ್ನೇಹಿತರ ಸೇರಿದ ಶನಿವಾರದ ದೀಪೋತ್ಸವ ರಾಷ್ಟ್ರಗೀತೆ ಯೊಂದಿಗೆ ಸಂಪನ್ನವಾಯ್ತು.
Oct 26, 2025