Dandeli 25th and 26th April, 2026- ಶ್ರೀ ಪ್ರಸನ್ನ ವೀರಾಂಜನೇಯ ಯೋಗಕೆಂದ್ರದ 57 ಪಟುಗಳು ಏಪ್ರಿಲ್ 24ರ ರಾತ್ರಿ 11ಕ್ಕೆ ರಾಣಿ ಚೆನ್ನಮ್ಮ ಎಕ್ಸ್ಪ್ರೆಸ್ ರೇಲಿನಲ್ಲಿ ಬೆಂಗಳೂರು ರೇಲುನಿಲ್ದಾಣದಿಂದ ಹೊರಟು 25ರ ಬೆಳಿಗ್ಗೆ ಆರುಗಂಟೆಗೆ ಧಾರವಾಡ ತಲುಪಿದೆವು. ನಿಲ್ದಾಣದಿಂದ ಹೊರ ಅಲ್ಲಿಂದ ನಾವೆಲ್ಲರೂ ದಾಂಡೇಲಿಗೆ ಎರಡು ಬಸ್ಸುಗಳಲ್ಲಿ ಹೊರಟು, ದಾಂಡೇಲಿ ತಲುಪಿದೆವು. ಪಕ್ಕದಲ್ಲಿ ಕಾಳೀನದಿ ನಮ್ಮನ್ನು ಸ್ವಾಗತಿಸಿದಳು ಮುಂದಿನ ಒಂದು ತಿರುವಿನಲ್ಲಿ ನಮ್ಮ ವಸತಿಯ ತಾಣ 'ರುಕ್ಮಿಣೀ ವನವಾಸೀ ಬಾಲಕಿಯರ ವಸತಿನಿಲಯ'; ತಲುಪಿದೆವು. ವನವಾಸಿ ಕೇಂದ್ರ ಕರ್ನಾಟಕ ಇದರ ರಾಜ್ಯ ಸಹ ಸಂಘಟನಾ ಕಾರ್ಯದರ್ಶಿವೀಂದ್ರರು ಆತ್ಮೀಯತೆಯಿಂದ, ನಗುಮೊಗದಿಂದ ನಮ್ಮೆಲ್ಲರನ್ನು ಆಹ್ವಾನಿಸಿದರು. ನಾವು ಬಸ್ಸಿನಿಂದ ಇಳಿದೊಡನೆ ಪಕ್ಕದಲ್ಲೇ ಇದ್ದ ಸ್ನಾನಘಟ್ಟಕ್ಕೆ ದೌಡಾಯಿಸಿ ತಿಂಡಿ ತಿಂದೆವು, ಅಲ್ಲಿಂದ ನಮ್ಮ ಆ ದಿನದ ಮೊದಲ ಪಯಣ ಸೂಪಾ ಅಣೆಕಟ್ಟೆಗೆ. ಅಣೆಕಟ್ಟೆಯಲ್ಲಿ ಬೃಹತ್ ಸೂಪಾ ಡ್ಯಾಮನ್ನೂ ಸುತ್ತಲ ರಮ್ಯ ಪ್ರಕೃತಿಯನ್ನೂ ಕಣ್ದುಂಬಿಕೊಂಡೆವು. ಮುಂದೆ ನಮ್ಮ ಪಯಣ ಕಾಳಿ ನದಿಯ ದಂಡೆಯೊಂದರಲ್ಲಿರುವ ಸಾಹಸಕ್ರೀಡಾ ತಾಣವಾದ ರಿವರ್-ರಾಫ್ಟಿಂಗ್ ಎಡೆಗೆ. ವೇಗವಾಗಿ ಹರಿಯುವ ಕಾಳಿನದಿಯಲ್ಲಿ, ಒಂದೆಡೆ ಹತ್ತು ಹನ್ನೆರಡು ಅಡಿ ಆಳಕ್ಕೆ ಇಳಿಜಾರಿನಲ್ಲಿ ಸಾಗಿಬಿಡುವ ಅತ್ಯಪರೂಪದ ಅನುಭವ! ಊಟದ ನಂತರ, 'ಕಲಭಾವಿ' ಎನ್ನುವ ವನವಾಸಿಗಳ ವಾಡಾ ಭೇಟಿ ಕೊಟ್ಟೆವು. ಈ ವಾಡಿಯ ಮಕ್ಕಳಿಗೆ ದೇವರನಾಮ, ಭಜನೆ, ಆಟೋಟ, ಸಂಸ್ಕೃತಿ, ಮನೆಪಾಠ ಇತ್ಯಾದಿ ಸೇವೆಗಳಲ್ಲಿ ಸಂಗೀತ ಎನ್ನುವ ಉತ್ಸಾಹೀ ಮಹಿಳೆ, ಬ್ಯಾಂಕ್ ವ್ಯವಹಾರಗಳಲ್ಲಿ ಇಡುತೆಗಿ ಲೆಕ್ಕಾಚಾರಗಳನ್ನು ಸೋನೂಬಾಯಿ ಎನ್ನುವ ಮಹಿಳೆ ನಿಭಾಯಿಸುತ್ತಿದ್ದಾರೆ. ವಾಡೆಯ ಮಕ್ಕಳು ಭಜನೆ ದೇವರನಾಮಗಳಿಂದ ನಮ್ಮನ್ನು ರಂಜಿಸಿದರು. ವಾಡೆಯ ಉಳಿದ ಹಿರಿಯರುಗಳು ಸಹಾ ನಮ್ಮನ್ನು ಆತ್ಮೀಯತೆಯಿಂದ ಮಾತನಾಡಿಸಿದರು. ಮರುದಿನ ಬೆಳಿಗ್ಗೆ 'ಕುಳಗಿ' ಎನ್ನುವ ಇನ್ನೊಂದು ವನವಾಸಿಗಳ ವಾಡೆಗೆ ಭೇಟಿಕೊಟ್ಟೆವು. ಇಲ್ಲಿನ ವಾಡೆಯ ಜನರೂ ಅಷ್ಟೇ, ತುಂಬಾ ಸರಳರು, ಸಜ್ಜನರು. ಮಕ್ಕಳು ಮಹಿಳೆಯರು, ಪುರುಷರು ಎಲ್ಲರೂ ಅವರ ನೃತ್ಯಗಳ, ವೇಷಭೂಷಗಳ ಪರಿಚಯ ಮಾಡಿಕೊಟ್ಟರು; ಒಟ್ಟಾರೆ ಎರಡೂ ವಾಡೆಗಳ ದರ್ಶನದಿಂದ ನಮಗೆ ಈ ವನವಾಸಿಗಳ ಸಂಸ್ಕೃತಿಯ ಪರಿಚಯವೂ ಅಷ್ಟಿಷ್ಟಾದರೂ ಆಯಿತು. ಅಲ್ಲಿಂದ ನಾವು ಅಂಬಿಕಾನಗರದ "ಸೈಕ್ಸ್ ಪಾಯಿಂಟ್" ಎನ್ನುವ ಈ ಸ್ಥಳದಿಂದ ಸಾವಿರ ಅಡಿ ಆಳದ ಪ್ರಪಾತದಲ್ಲಿ ಶಾಂತವಾಗಿ ಹರಿಯುತ್ತಿದ್ದ, ಶುದ್ಧ, ಆದರೆ ಕಪ್ಪು ಬಂಣದ ಕಾಳಿಯ ದರ್ಶನ ನಮಗಾಯಿತು; ನಂತರ ಕಾಳಿ ನದಿಯ ದಂಡೆ, ಮೌಳಂಗಿಗೆ ಭೇಟಿ ಕೊಟ್ಟು ನೀರಲ್ಲಿ ಕುಳಿತು ಮುಳುಗಿ, ಒಬ್ಬರಿಗೊಬ್ಬರು ನೀರೆರೆಚುತ್ತಾ ಆಟವಾದಿದೆವು. ನಮ್ಮ ಶ್ರೀ ಪ್ರಸನ್ನ ವೀರಾಂಜನೇಯ ಸೇವಾ ದತ್ತಿಯ ವತಿಯಿಂದ ಒಂದು ಲ್ಯಾಪ್ಟಾಪ್, ಹಾಗೂ ಬ್ಯಾಂಕ್ ಟ್ರಾನ್ಸಫರ್ ಮುಖಾಂತರ ರೂ 50,000 ವನವಾಸಿ ಕೇಂದ್ರ ಕರ್ನಾಟಕ ಟ್ರಸ್ಟ್ ಅವರಿಗೆ ನಮ್ಮ ಸಣ್ಣ ಕಾಣಿಕೆ ಸಲ್ಲಿಸಿದೆವು.
Apr 24 – 30